ವೈವಿಧ್ಯಯಮಯವಾದ ಆವಾಸಸ್ಥಾನಗಳನ್ನು ಹೊಂದಿರುವ ಕರ್ನಾಟಕದ ರಾಜ್ಯವು, ಅದ್ಭುತವಾದಂತಹ ಹಕ್ಕಿ ಪ್ರಭೇದಗಳ ನೆಲೆಬೀಡಾಗಿದೆ. ನಮ್ಮ ಸುತ್ತಮುತ್ತಲು ಕಂಡುಬರುವ ಸಾಮಾನ್ಯ ಹಕ್ಕಿಗಳನ್ನು ಮಕ್ಕಳಿಗೆ ಪರಿಚಯಿಸುವುದರ ಸಲುವಾಗಿ ‘ಕುತೂಹಲಿ’ ಎಂಬ ಕನ್ನಡ ವಿಜ್ಞಾನ ಪತ್ರಿಕೆಯ ‘ಹಕ್ಕಿಯ ಗೂಡು’ ಎಂಬ ಅಂಕಣಕ್ಕೆ ಹಕ್ಕಿಗಳ ಕುರಿತಾದ ಲೇಖನಗಳನ್ನು ಅರ್ಲಿ ಬರ್ಡ್ ತಂಡವು ನೀಡುತ್ತಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿ ಪ್ರಭೇದಗಳು, ಅವುಗಳ ನಡವಳಿಕೆ ಮತ್ತು ಅವುಗಳ ಬಗೆಗಿನ ಮೋಜಿನ ಸಂಗತಿಗಳನ್ನು ಹೆಚ್ಚು ತಿಳಿದುಕೊಳ್ಳ ಬಯಸುವ ಎಲ್ಲರಿಗೂ ಇದು ಬಹಳ ಪ್ರಯೋಜನಕಾರಿಯಾಗಿದೆ.
ಪ್ರತಿ ತಿಂಗಳು ಪ್ರಕಟಿಸಲಾಗಿರುವ ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆಗಳಲ್ಲಿನ ನಮ್ಮ ಲೇಖನಗಳು ಈ ಕೆಳಕಂಡಂತಿವೆ.
ಇದೊಂದು ಉಚಿತ ಪತ್ರಿಕೆಯಾಗಿದ್ದು, ನೀವು ಸುಲಭವಾಗಿ ಡೌನಲೋಡ್ ಮಾಡಿಕೊಂಡು, ಮುದ್ರಿಸಿಕೊಳ್ಳಬಹುದು ಹಾಗೆಯೇ ಗೆಳೆಯರು ಮತ್ತು ಬಂಧುಗಳ ಜೊತೆಗೂ ಹಂಚಿಕೊಳ್ಳಬಹುದು. ಚಂದಾದಾರರಾಗಲು ಈ ಫಾರ್ಮನ್ನು ಭರ್ತಿ ಮಾಡಿ.
ಕಲಬುರಗಿಯಲ್ಲಿ ಪುಟ್ಟ ಹಕ್ಕಿ ಪ್ರಭೇದವಿದೆ. ತೆಳು ಉದ್ದ ಕೊಕ್ಕು ಗುಬ್ಬಚ್ಚಿಗಿಂತ ತೀರಾ ಚಿಕ್ಕದು. ಬೇವು ಪೊದೆ ಗಿಡಗಳ ಹೂವಿನ ಮಕರಂದ ಹೀರುತ್ತದೆ. ಸಣ್ಣ ಕಳ್ಳಿಪೀರವೇ ಇರಬಹುದು. ಅದರೆ ಅದರ ಚಿತ್ರ ನನ್ನ ಬಳಿ ಇಲ್ಲ. ಅದರ ಜೀವನ ವಿಧಾನ ಅರಿಯಬೇಕು. ಸಜಾಯ ಬೇಕು.
ಪಕ್ಷಿಯನ್ನು ಸೂಕ್ಷ್ಮವಾಗಿ ವೀಕ್ಷಿಸುವ ನಿಮ್ಮ ಉತ್ಸಾಹ ಮತ್ತು ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ.
ಸಹಾಯಕ್ಕಾಗಿ earlybird@ncf-india.org ಗೆ ಬರೆಯಬಹುದು.