ಪಕ್ಷಿ ಶಿಕ್ಷಕರ ಕೈಪಿಡಿಯು ಪ್ರಕೃತಿ ಮತ್ತು ಪಕ್ಷಿಗಳ ಬಗ್ಗೆ ಅಗಾಧವಾದ ಒಲವಿದ್ದು, ಅದನ್ನು ಹೆಚ್ಚಿನ ಜನರಿಗೆ ಪಸರಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿರುವವರಿಗೆ ಸೂಕ್ತವಾದುದಾಗಿದೆ. ಶಿಕ್ಷಕರು ಕಡಿಮೆ ಅವಧಿಯಲ್ಲಿ, ಯಾವುದೇ ವೆಚ್ಚವಿಲ್ಲದೆ ನಡೆಸಬಹುದಾದ ಅತ್ಯುತ್ತಮ ವಿಚಾರಗಳು, ಚಟುವಟಿಕೆಗಳು, ಯೋಜನೆಗಳು ಮತ್ತು ಆಟಗಳ ಸಂಗ್ರಹವು ಇದಾಗಿದೆ. ಮಕ್ಕಳನ್ನು ಪ್ರಕೃತಿ ಮತ್ತು ಪಕ್ಷಿಗಳ ಆಕರ್ಷಕ ಪ್ರಪಂಚಕ್ಕೆ ಪರಿಚಯಸುವ ವಿಧಾನಗಳನ್ನು ತಿಳಿಯದವರಿಗೆ ಮತ್ತು ಹೇಗೆ ಪ್ರಾರಂಭಿಸಬೇಕು ಎಂಬ ತಿಳುವಳಿಕೆಯ ಅವಶ್ಯಕತೆ ಇರುವ ಎಲ್ಲರಿಗಾಗಿ ಇದನ್ನು ವಿಶೇಷವಾಗಿ ರೂಪಿಸಲಾಗಿದೆ.
ಇಲ್ಲಿ ಪ್ರಸ್ತುತಪಡಿಸಲಾದ ವಿಚಾರಗಳು ಮತ್ತು ವಿಧಾನಗಳು, ಅನುಭವಿ ಪ್ರಕೃತಿ ಶಿಕ್ಷಕರಿಂದ ಪಡೆದ ಮಾಹಿತಿಯನ್ನು ಆಧರಿಸಿವೆ ಮತ್ತು ವಿವಿಧ ಸಂದರ್ಭಗಳು, ಭಾಷೆಗಳು ಮತ್ತು ಜನಸಮೂಹಗಳಿಗೆ ತಕ್ಕಂತೆ ಹೊಂದಿಸಿಕೊಳ್ಳಬಹುದಾಗಿದೆ. ಈ ಕೈಪಿಡಿಯು ಹವ್ಯಾಸಿ ಪಕ್ಷಿ ವೀಕ್ಷಕರಿಂದ ಹಿಡಿದು ಶಿಕ್ಷಕರು, ಪ್ರಕೃತಿಶಾಸ್ತ್ರಜ್ಞರು ಅಥವಾ ಪೋಷಕರವರೆಗೆ ಪ್ರಕೃತಿ ಶಿಕ್ಷಣದ ಕುರಿತಾಗಿ ಆಸಕ್ತಿಯನ್ನುಂಟುಮಾಡುತ್ತದೆ. ಇದರೊಂದಿಗೆ, ಎಲ್ಲಾ ವಯಸ್ಸಿನ ಆಸಕ್ತರಿಗೆ, ವಿಶೇಷವಾಗಿ ಮಕ್ಕಳಿಗೆ, ಪಕ್ಷಿಗಳು ಮತ್ತು ಪ್ರಕೃತಿಯನ್ನು ಪರಿಚಯಿಸಲು ಅಗತ್ಯವಾದ ಕೌಶಲ್ಯ ಮತ್ತು ತಂತ್ರಗಳನ್ನು ಬೆಳೆಸಿಕೊಳ್ಳಲು ಇದೊಂದು ಉತ್ತಮವಾದ ಸಂಪನ್ಮೂಲವಾಗಲಿದೆ ಎಂದು ಆಶಿಸುತ್ತೇವೆ.
ಕೈಪಿಡಿಯನ್ನು ಈ ಸುಲಭವಾದ ಫ್ಲಿಪ್‌ಬುಕ್ ಸ್ವರೂಪದಲ್ಲಿ ಓದಿ (ಕಂಪ್ಯೂಟರ್‌ನಲ್ಲಿ ವೀಕ್ಷಿಸಿದರೆ ಉತ್ತಮ)
ಕೈಪಿಡಿಯ ಪಿಡಿಎಫ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಕೈಪಿಡಿಯ ಮುದ್ರಿತ ಪ್ರತಿಗಳನ್ನು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಕೈಪಿಡಿಯ ಇಂಗ್ಲಿಷ್ ಆವೃತ್ತಿ ಇಲ್ಲಿ ಲಭ್ಯವಿದೆ
